(ರಾಗ ನಾಟಿ ಝಂಪೆತಾಳ)

ಜಯತು ಕೋದಂಡರಾಮ, ಜಯತು ದಶರಥರಾಮ
ಜಯತು ಸೀತಾರಾಮ , ಜಯತು ರಘುರಾಮ , ಜಯತು ಜಯತು ||ಪ||

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ || ಜಯತು ||

ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ||ಜಯತು ||

ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ ||ಜಯತು ||