ಇಂದಿನ ದಿನ ಶುಭದಿನ
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಕರಣ ಶುಭಕರಣ
ಇಂದಿನ ಯೋಗ ಶುಭಯೋಗ
ಇಂದಿನ ಲಗ್ನ ಶುಭಲಗ್ನ
ಇಂದು ಪುರಂದರವಿಠಲರಾಯನ
ಪಾಡಿದ ದಿನವೆ ಶುಭದಿನವು ( /ಸಂದರುಶನ ಫಲವೆಮಗಾಯಿತು)||