ರಾಗ ಸಾವೇರಿ/ಚಾಪು ತಾಳ
ಕಂದನ ಕಾಣಿರೇನೆ ಗೋಪಿಯ ಕಂದ || ಪಲ್ಲವಿ ||
ಕಂದನಲ್ಲವೆ ಎನ್ನ ಕುಂದಣದರಗಿಣಿಯೆ || ಅನು ಪಲ್ಲವಿ ||
ಉಂಗುರನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ
ಬಂಗಾರದ ಟೊಪ್ಪಿಗೆ ತಲೆಯ ಮೇಲಿಟ್ಟ || ೧ ||
ರೊಟ್ಟಿಯ ಸುಟ್ಟಿದ್ದೆ ತುಪ್ಪವ ಕಾಸಿದ್ದೆ
ಇಷ್ಟು ಹೊತ್ತು ಹೋಯಿತು ಉಣಲಿಲ್ಲ || ೨ ||
ಕಾಶಿಗೆ ಹೋಗಿ ನಾ ಕೂಸಿನ ಪಡೆದೆ ಪುರಂದರವಿಠಲನ
ದಾಸರಿಗೆ ತಕ್ಕ ಮಗುವೇ ನಮ್ಮಮ್ಮ || ೩ ||
~~~ * ~~~
[ಇದು ವಿಷ್ಣುಪರವಾದ ಪದ. ಬಹುಶಃ ಕಾಶಿಯಲ್ಲಿ ಬಿಂಧುಮಾಧವನ ದರ್ಶನವಾದಾಗ ರಚಿಸಿದ್ದು.
ಜನರ ಸಂದಣಿಯಲ್ಲಿ ಅವರ ಮಗುವೇ ಒಂದು ದಿಟವಾಅಗಿ ಕಾಣೆಯಾಗಿದ್ದಿತೋ ಏನೋ.
ಅದು ಮತ್ತೆ ದೊರೆತಾಗ ಹೊರಬಂದ ಪದವೂ ಇದ್ದೀತು.]
[ಪುರಂದರ ಸಾಹಿತ್ಯ ದರ್ಶನ - ಭಾಗ ೧]
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!