ರಾಗ : ದುರ್ಗ ತಿಶ್ರ ಏಕತಾಳ

ಈತ ಲಿಂಗದೇವ ಶಿವನು, ಆತ ರಂಗಧಾಮ ವಿಷ್ಣು
ಮಾತನಾಡೋ ಮಂಕು ಮನುಜ
ಮನದ ಅಹಂಕಾರವನೇ ಜರಿದು....

ವೇದಕೆ ಸಿಲುಕಿದನೀತ, ವೇದ ನಾಲ್ಕು ತಂದನಾತ
ಬೂದಿ ಮೈಯಲಿ ಧರಿಸಿದನೀತ
ಭುವನ ಗಿರಿಯ ಪೊತ್ತನಾತ...

ಆದಿ ದೈತ್ಯರ ಗೆಲಿದನೀತ, ಮಾಧವ ಮಧುಸೂದನನಾತ
ಮದನನನು ಧಹಿಸಿದನೀತ
ಮನ್ಮಥನ್ನ ಪಡೆದನಾತ....

ಗಂಗೆಯ ಪೊತ್ತನೀತ, ಗರುಡವಾಹನ ಏರಿದನಾತ
ತುಂಗ ಹೆಳವನಾಕಟ್ಟೆ
ಲಿಂಗನೀತ ರಂಗನಾಥ...