ಹರ(ಡ)ಪನಹಳ್ಳಿ ಭೀಮವ್ವನವರ ರಚನೆ - ಅಂಕಿತ "ಭೀಮೇಶ ಕೃಷ್ಣ"

ರಾಗ : ಪೂರ್ವಿಕಲ್ಯಾಣಿ ರೂಪಕ ತಾಳ

ನೀನೆ ಸಜ್ಜನರ ಬಂಧೂ... ಕಾರುಣ್ಯ ಸಿಂಧೂ

ಕರಿಮರಿ ಬಳಗ ಬಂದೊದಗಿದರೇನೂ
ಪರಿಪರಿ ಕ್ಲೇಶವ ಬಿಡಿಸಲಿಲ್ಲ
ಹರಿ ನೀನೆ ಗತಿ ಎಂದರೆ ಆ ಕ್ಷಣದಲ್ಲಿ
ಕರಿ ಬಂಧನ ಪರಿಹರಿಸಿದೆ ಕೃಷ್ಣಾ....

ಯಾರಿದ್ದರೂ ಭವ ಘೋರ...
ದುರಿತ ಯಮ ಬಾಧೆಗಳ ತಪ್ಪಿಸುವರಿಲ್ಲ
ಶ್ರೀ ರಮಣನೆ ಭೀಮೇಶ ಕೃಷ್ಣನೆಂದೂ
ಸಾರುವರಿಗೆ ಕರುಣೆ ವಾರಿಧಿ ಹರಿಯೇ.....