ಲಾಲಿ ಶ್ರೀ ಹಯವದನ ಲಾಲಿ ರಂಗ ವಿಠಲ
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ||
ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ್ಲ
ಎತ್ತಿದರು ಎನ್ನಯ ಕೈಯೊಳಗೆ ನಿಲ್ಲ|
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನ ಎತ್ತಿಕೊ ನಂದಗೋಪಾಲ||
ಮನೆಯೊಳಗೆ ಇರನೀತ ಬಹು ರಚ್ಚೆವಂತ
ಮನೆವಾರ್ತೆ ಯಾರು ಮಾಡುವರು ಶ್ರೀಕಾಂತ|
ಗುಣ ಗುಣಗಳೊಳಗಿಪ್ಪ ಬಹು ಗುಣವಂತ
ಗುಣ ಬದ್ಧ ನಾಗದಿಹ ಶ್ರೀ ಲಕ್ಷ್ಮೀಕಾಂತ||
ಕ್ಷೀರಾಂಬು ನಿಧಿಯೊಳಗೆ ಸಜ್ಜೆಯೊಳಗಿರುವ
ಶ್ರೀ ರಮಣ ಭಕ್ತರಿಚ್ಚೆಗೆ ನಲಿದು ಬರುವ|
ಕಾರುಣ್ಯ ಹಯವದನ ಕಾಯ್ವ ತುರುಕರುವ
ನೀರೆ ಗೋಪಿಯರೊಳು ಮೆರೆವ ಕಡು ಚೆಲುವ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!