<b>ಈ ಉಗಾಭೋಗವನ್ನು ಶ್ರೀ ವಿದ್ಯಾಭೂಷಣರು ಪಂತುವರಾಳಿ ರಾಗದಲ್ಲಿ ಹಾಡಿದ್ದಾರೆ.</b>

ಚೋರಗೆ ಚಂದ್ರೋದಯ ಸೊಗಸುವುದೇ
ಜಾರಗೆ ಸೂರ್ಯೋದಯ ಸೊಗಸುವುದೇ
ಶ್ರೀ ರಮಣನ ಕಥೆಯು ಕಳ್ಳಗೆ ಮೆಚ್ಚುವುದೇ|

ನಾರಿಗೆ ನಯವಿಲ್ಲದ ಚೆಲುವಿಕೆಯು
ಹರಿಸ್ಮರಣವಿಲ್ಲದ ಹಾಡಿಕೆಯು
ಅರಣ್ಯರೋದನ ಪುರಂದರ ವಿಠಲ|