(ಕೃತಿಕಾರರು-ಜಗನ್ನಾಥದಾಸರು
ರಾಗ - ಮಧ್ಯಮಾವತಿ(ಯಮನ್ ಕಲ್ಯಾಣ) ಆದಿತಾಳ(ಝಪ್)

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ||
ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ||

ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|

ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨||

ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸು
ಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩||