(ರಾಗ - ಪಂತುವರಾಳಿ(ಕಾಲಿಂಗಡ) ಆದಿತಾಳ(ಕಹರವಾ)
ತಟಿತ್ಕೋಟಿ ನಿಭಕಾಯ ಜಗನ್ನಾಥ
ವಿಠಲಯ್ಯಾ ವಿಠಲಯ್ಯಾ ||ಪ||
ಭಜಿಸುವೆ ನಿನ್ನನು ಅಜಭವಸುರನುತ
ಭಜಕಾಮರತರು ಕುಜನಕುಠಾರಾ ||೧||
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರ್ಯಾರು ದಯಾಪರ ಮೂರುತಿ ||೨||
ಶರಣಾಗತರನು ಪೊರೆವೆನೆಂಬ ತವ
ಬಿರುದು ಕಾಯೋ ಕರಿವರ ಜಗನ್ನಾಥ ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!