ಮಧುರವು ಮಧುರನಾಥನ ನಾಮವು
ದಧಿ ಮಧು ದ್ರಾಕ್ಷಾಸುಧೆರಸಗಳಿಗಿಂತ||
ಸುಂದರವದನನ ಅರವಿಂದ ನಯನನ
ನಂದಕುಮಾರನ ಚೆಂದದ ನಾಮವು||
ಯದುಕುಲತಿಲಕನ ಸದಮಲ ಚರಿತನ
ಮದನಪಿತನ ನಾಮ ಮುದದಲಿ ಪಾಡಲು||
ಗಾನವಿಲೋಲನ ದಾನವಕಾಲನ
ಲೀಲೆಗಳನು ಸದಾ ಲಾಲಿಸಿ ಪೊಗಳಲು||
ಹೇಮವಸನನ ಕೋಮಲರೂಪನ
ಭಾಮಕಾಂತನ ಪ್ರೇಮದ ನಾಮವು||
ಪನ್ನಗಶಯನನ ಚಿನ್ಮಯರೂಪನ
ಸನ್ನುತಿಸಲಿಕೆ ಪ್ರಸನ್ನನ ನಾಮವು||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!