(ರಾಗ - ದಾನೀ ದೀಪಚಂದಿ ತಾಳ)

ಇದೇ ನಿತ್ಯ ನಮಸ್ಕಾರ ನೋಡಿ
ಗುರುಚರಣಕೆ ಮನಗೂಡಿ ||ಪ||

ಬಿಡದಿಹುದೇ ಸತ್ಸಂಗ
ನೋಡಿ ಇದುವೇ ಶಿರಸಾಷ್ಟಾಂಗ
ಕಡದ್ಹೋಯಿತು ಭವದುಸ್ಸಂಗ
ದೃಢಮಾಡಿ ಮನ ಅಂತರಂಗ ||೧||

ನಮ್ರತೆಯಲಿಹುದೇ ನಮನ
ಪ್ರೇಮಭಾವವೆಂಬುದು ಪ್ರದಕ್ಷಿಣ
ನೇಮದಿಂದ ನಡೆದವನು ದಿನಾ
ಬ್ರಹ್ಮಾನಂದದೋರುವ ಸಾಧನ ||೨||

ಗುರ್ವಿನಂಘ್ರಿಗೆ ಎಡೆಮಾಡಿ
ಅರ್ವಿನೊಳಾದ ಮಹಿಪತಿ ನೋಡಿ
ಗರ್ವ ಪುಣ್ಯೆಂಬುದ ಈಡ್ಯಾಡಿ
ಸರ್ವ ಪಾಪ ಹೋಯಿತು ಓಡಿ ||೩||

------------ರಚನೆ ಮಹಿಪತಿದಾಸರು