---- ರಾಗ ಭೂಪಾಲಿ ( ಜೋಗಿಯಾ) ದೀಪಚಂದಿ ತಾಳ
ಎದ್ದಿರ್ಯಾ ? ನೀವಿನ್ನೆದ್ದಿರ್ಯಾ ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ||ಧ್ರುವ ||
ಶುದ್ಧಿ ಮೆರೆದು ಭವನಿದ್ರಿಯಗಳದಿನ್ನೆದ್ದಿರ್ಯಾ ||೧||
ಕಾಯಮಂದಿರದೊಳು ಮಾಯಾಮುಸುಕು ತೆಗೆದಿನ್ನೆದ್ದಿರ್ಯಾ ||೨||
ಚೆನ್ನಾಗಿ ಮಲಗಿದ್ದ ಜನ್ಮಹಾಸಿಗಿ ಬಿಟ್ಟು ಇನ್ನೆದ್ದಿರ್ಯಾ ||೩||
ಮನದಲ್ಲಿ ಇನಕೋಟಿತೇಜನ ಕಾಣ್ವ್ಹಾಂಗೆ ಇನ್ನೆದ್ದಿರ್ಯಾ ||೪||
ಎದ್ದಿದ್ದರೆ ನೀವಿನ್ನು ಶುದ್ಧಬುದ್ಧರಾಗಿ ಇನ್ನೆದ್ದಿರ್ಯಾ ||೫||
ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು ಇನ್ನೆದ್ದಿರ್ಯಾ ||೬||
ದೀನ ಮಹಿಪತಿಸ್ವಾಮಿ ಮನೋಹರ ಮಾಡ್ವ್ಹಾಂಗ ||೭||
---- ರಚನೆ ---ಮಹಿಪತಿದಾಸರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!