(ಮಾಂಡ್ ರಾಗ ಕೇರವಾ ತಾಳ )
ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೀಡಮ್ಮನೆ
ಬೊಮ್ಮನಾ ಪಡೆದ ಶ್ರೀಹರಿ ಪರಬ್ರಹ್ಮನೆ ||ಪ||
ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ
ಓಡ್ಯಾಡಿ ಬಂದು ಅಂಡಲಿವೆ ನಾ ತಮ್ಮನೆ ||೧||
ಬಯಸಿ ಬಂದೊಡೆ ನಾ ಕಾಯಬೇಕೆನ್ನನ
ತಾಯಿ ತಂದ್ಯೊಬಳೆ ನೀನೇ ಸನಾತನ ||೨||
ಉಣಿಸು ನಾಮಾಮೃತ ದಣಿಸು ಮನೋರಥ
ದೀನ ಮಹಿಪತಿ ಜೀವ ಪ್ರಾಣಕ ಸನಾಥ ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!