(ಬಾಗೇಶ್ರೀ ರಾಗ , ಝಂಪೆತಾಳ )

ಜಯ ಜಯ ಸರಸ್ವತಿ
ಜಯವರ ಪೂರಣಮತಿ
ತ್ರಯಲೋಕ್ಯದಲಿ ಖ್ಯಾತಿ
ಜಯ ಸುಕೀರ್ತಿ ||ಪ||

ವಿದ್ಯಾವರದಾಯಿನೀ
ಸಿದ್ಧಿಗೆ ಶಿಖಾಮಣೀ
ಬುದ್ಧಿಪ್ರಕಾಶಿನೀ
ಸದ್ಭೂಷಿಣೀ ||೧||

ಕರಕಮಲದಲಿ ವೀಣೀ
ಸುರಸ ಅಮೃತವಾಣೀ
ವರವಿದ್ಯದಲಿ ದಾನೀ
ಸುಪ್ರವೀಣೀ ||೨||

ಪ್ರಸನ್ನ ವದನೀ
ವಿಶ್ವದಲಿ ನೀ ಪೂರ್ಣೀ
ಹಂಸವಾಹಿನೀ ಪೂರ್ಣಿ
ಸ್ವಸಿದ್ಧಿಣೀ ||೩||

ಸದಾಸದ್ಗುರು ಸ್ತುತಿ
ಒದಗುಹಾಂಗ ಸ್ಫೂರ್ತಿ
ಇದೇ ಮಹಿಪತಿ ಕುರ್ತಿ ( ಕೃತಿ?)
ಬೋಧಿಸು ಮತಿ ||೪||