ರಾಗ: ವಸಂತ ಆದಿತಾಳ
ಕೊಡು ಬೇಗ ದಿವ್ಯ ಮತಿ ಸರಸ್ವತಿ
ಮೃಡ ಹರಿ ಹಯ ಮುಖರೊಡೆಯಳೆ ನಿನ್ನಯ
ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ |
ಇಂದಿರಾರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ |
ಅಖಿಳ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ|
ಪತಿತ ಪಾವನೆ ನೀನೆ ಗತಿಯೆಂದು ನಂಬಿದೆ
ಮತಿಗೊಟ್ಟು ಪುರಂದರ ವಿಠಲನ ತೋರೆ |
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!