( ಭೀಮ ಪಲಾಸ್ ರಾಗ ಆದಿತಾಳ(ತೀನ್ ತಾಲ್ ))

ಹೊಂದಿ ಸುಖಿಸು ಹರಿಯ ಪಾದ ||ಧ್ರುವ||

ನಾನಾ ಪುಣ್ಯ ನಿದಾನದಿ ಧರೆಯೊಳು
ಮಾನವ ಜನುಮಕೆ ನೀನೀಗ ಬಂದು
ಶ್ವಾನ ಸೂಕರ ಪರಿ ತಾ ನಿಜವರಿಯದೆ
ಜ್ಞಾನಶೂನ್ಯವಾಗಿ ನೀನಿಹುದಣ್ಣ ||೧||

ಹಿಡಿವರೆ ಭ್ರಾಂತಿಯ ಜಡಿವರೆ ಮಮತೆಯ
ನುಡಿವರೆ ಪುಸಿಯನು ಬಿಡುವರೆ ಸತ್ಯವ
ಇಡುವರೆ ದುರ್ಗುಣ ಸಿಡುವರೆ ಬೋಧಕೆ
ಕೆಡುವರೆ ಮರವಿಲಿ ಮಡಿವರೆ ವ್ಯರ್ಥ ||೨||

ಮೂರುದಿನದ ಸಂಸಾರದೊಳಗೆ ಕಂ-
ಸಾರಿಯ ಭಕ್ತಿಯ ಸೇರಿ ಭವಾಬ್ಧಿಯ
ಪಾರವಗಾಂಬುದು ಸಾರಸ್ವಹಿತ ಸಹ-
ಕಾರ ಮಹಿಪತಿ ಸಾರಿದ ಬೋಧ ||೩||