(ಭೂಪ್ ರಾಗ ದೀಪಚಂದಿ ತಾಳ)
ಇದೇ ನೋಡಿರೋ ಸುಸ್ನಾನ
ಸದ್ಬೋಧದಲಿಹುದು ಮನ ||ಧ್ರುವ||
ಜ್ಞಾನವೆಂಬುದೆ ಪುಣ್ಯನದಿ ಮನ ನಿರ್ಮಲ ಮಾಡುದು ನಾದಿ
ನಾನ್ಯಃ ಪಥವೆಂಬುದು ಓದಿ ಖೂನದೋರುದು ಸುಪಥದ ಹಾದಿ ||೧||
ಜ್ಞಾನ ಭಾಗೀರಥೀ ಸ್ನಾನ ಮಾಡಿ ಮನಮೈಲ ಹೋಯಿತು ನೋಡಿ
ಘನಪುಣ್ಯೊದಗಿತು ಕೈಗೂಡಿ ಅನುದಿನ ಮನ ಮುಳಗ್ಯಾಡಿ ||೨||
ನಿತ್ಯ ಮಹಿಪತಿಗಿದೇ ಸುಸ್ನಾನ ನಿತ್ಯ ಸದ್ಗುರು ನಿಜಧ್ಯಾನ
ಉತ್ತಮೋತ್ತಮಿದೇ ಸಾಧನ ಹಿತದೋರುತಿದೆ ನಿಧಾನ ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!