( ದುರ್ಗಾ ರಾಗ ದಾದರಾ ತಾಳ)

ಕಂಡೆ ನಾನೊಂದು ಕೌತುಕವ ||ಧ್ರುವ ||

ಆಯಿ ಅಜ್ಜನ ನುಂಗಿದ ಕಂಡೆ
ನಾಯಿ ಲಜ್ಜೆಯ ಹಿಡಿದುದ ಕಂಡೆ
ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ-
ಪ್ರದಕ್ಷಿಣೆ ಮಾಡುದು ಕಂಡೆ ||೧||

ಇರುಹೆ ವಿಷ್ಣುನ ನುಂಗಿದ ಕಂಡೆ
ನರಿಯು ರಾಜ್ಯನಾಳುದ ಕಂಡೆ
ಅರಿಯು ಮರಿಯ ನುಂಗಿದ ಕಂಡೆ
ಕುರಿಯಿಂದ ಪರಲೋಕಯೆಯ್ದಿದ ಕಂಡೆ ||೨||

ಇಲಿಯು ಯುಕ್ತಿಯದೋರುದು ಕಂಡೆ
ಹುಲಿಯು ಭಕ್ತಿಯ ಮಾಡುದು ಕಂಡೆ
ಇಳೆಯೊಳು ಮಹಿಪತಿ ಕಳೇವರದೊಳಿನ್ನು
ಮುಕ್ತಿಸಾಧನದೊಂದು ಬೆಡಗನು ಕಂಡೆ ||೩||