( ಭೈರವಿ ರಾಗ ದಾದರಾ ತಾಳ)
ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ ||ಧ್ರುವ ||
ಅಜ ನುಂಗಿತು ಗಜವ
ವಾಜಿ ನುಂಗಿತು ಈ ಮೂಜಗವ
ರಾಜ್ಯ ನುಂಗಿತು ಪ್ರಜರ
ಸಂಜೀವ ನುಂಗಿತು ಸಂಜೀವ ||೧||
ಇಲಿಯು ನುಂಗಿತು ಮೊಲವ
ಹಲ್ಲಿ ನುಂಗಿತು ಹಲವು ಕುಲವ
ಜಲ ನುಂಗಿತು ಜಲವ
ಹುಲಿ ನುಂಗಿತು ಈ ಮಾರ್ಬಲವ ||೨||
ಅರಿಯು ನುಂಗಿತು ಮರವ
ನೊರಜ ನುಂಗಿತು ಗಿರಿಪರ್ವತವ
ಇರಹು ನುಂಗಿತು ಸರ್ವ
ಬೆರಗಾಯಿತು ಮಹಿಪತಿಜೀವ ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!