(ಭೀಮಪಲಾಸ್ ರಾಗ ತೀನ್ ತಾಳ)

ಲೇಸು ಲೇಸಾಯಿತೆನ್ನ ಜನುಮ ನೋಡಿ
ವಾಸುದೇವನೆ ಬಂದ ಕೈಗೂಡಿ ||ಧ್ರುವ||

ಎನ್ನ ಮಾನಾಭಿಮಾನ ಆದ ಹರಿಯೆ
ಇನ್ನು ಇಂಥ ಪುಣ್ಯಕ ನೋಡಿ ಸರಿಯೆ
ಧನ್ಯಗೈಸಿದುತ್ತೀರ್ಣಾಗಲರಿಯೆ
ಇನ್ನೊಬ್ಬರಿಗೇನು ಮುಚ್ಚುಮರಿಯೆ ||೧||

ಕೋಟಿ ಜನ್ಮದಲಿ ಮಾಡಿದ ಸುಪುಣ್ಯ
ನಾಟಿ ಬಂತೆನ್ನೊಳಗಸು ತಾರ್ಕಣ್ಯ
ನೀಟದೋರಿತು ಘನ ಸುಚೈತನ್ಯ
ನೋಟ ನೆಲೆಗೊಂಡಾಯಿತು ಧನ್ಯ ||೨||

ತಾನೆ ತಾನಾದೆನ್ನೊಳು ಬಂದು ನೋಡಿ
ಭಾನುಕೋಟಿ ಪ್ರಕಾಶ ದಯಮಾಡಿ
ದೀನ ಮಹಿಪತಿಗೆ ಸ್ವಸುಖ ನೀಡಿ
ಮನೋಹರ ಮಾಡಿದ ಮನಗೂಡಿ ||೩||