( ಮಾಲಕಂಸ್ ರಾಗ ಝಪ್ ತಾಳ)

ಜಯದೇವ ಜಯದೇವ ಜಯಗುರು ಮೈಲಾರಿ
ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ||ಧ್ರುವ||

ಖಡ್ಗವ ಕರದಲಿ ಪಿಡಿದು ಖಂಡಿಸಿದಜ್ಞಾನ
ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ
ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ
ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ ||೧||

ಮಲಹರಣ ಮಾಡಲು ಧರಿಸಿ ಅವತಾರ
ಮೂಲೋಕ ಪಾವನ ಮಾಡುವ ಸಹಕಾರ
ಸಲಹುವೆ ಭಕ್ತ ಜನರಿಗೆ ನೀ ಘನ ಮಂದಾರ
ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿ ಶೂರ ||೨||

ಮಹಿಗೆ ಪತಿ ಅಹುದು ಶ್ರೀಗುರು ಭೂಪತಿ
ಬಾಹ್ಯಾಂತ್ರ ಬೆಳಗುವೆ ಶ್ರೀಪಾದಕೆ ಆರ್ತಿ
ಇಹಪರಕೆ ದಾತನಹುದೋ ಶ್ರೀಪತಿ
ಜಯಜಯವೆಂದು ಬೆಳಗುವೆ ದಾಸ ಮಹಿಪತಿ ||೩||