(ರಾಗ ಪಂತುವರಾಳಿ ಏಕತಾಳ )

ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ |
ಜೋಡಿ ಹೆಂಡ್ರಂಜಿ ಓಡಿಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ ||

ಎಚ್ಚರಗೊಳಲಿಲ್ಲಾ , ಮನವೇ
ಹುಚ್ಚನಾದೆನಲ್ಲಾ |
ಅಚ್ಚಿನೊಳಗೆ ಮೆಚ್ಚು
ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದುಹೋಯಿತಲ್ಲಾ ||

ಮುಪ್ಪು ಬಂದಿತಲ್ಲಾ , ಪಾಯಸ
ತಪ್ಪದೆ ಉಣಲಿಲ್ಲಾ |
ತುಪ್ಪದ ಬಿಂದಿಗೆ
ತಿಪ್ಪೆಯ ಮೇಲೆ
ಧೊಪ್ಪಗೆ ಬಿತ್ತಲ್ಲಾ ||

ಯೋಗವು ಬಂತಲ್ಲಾ , ಬದುಕು ವಿ-
ಭಾಗವಾಯಿತಲ್ಲಾ |
ಭೋಗಿಶಯನ ಶ್ರೀ
ಪುರಂದರವಿಠಲನ
ಆಗ ನೆನೆಯಲಿಲ್ಲಾ ||