(ತೋಡಿ ರಾಗ , ಆದಿತಾಳ)

ತಾ ತಾ ತಾ ತಾ ತಾ ರಂಗ ನಿನ್ನ ಪಾದ
ಧೈ ಧೈ ಧೈ ಧೈ ಧೈ ಎಂದು ಕುಣಿಯುತ ||ಪ||

ನಿಗಮವ ತಂದು ನಗವ ಬೆನ್ನಲಿ ಹೊತ್ತು
ಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು ||೧||

ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿ
ಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ ||೨||

ಅಂಗನೆಯ ವ್ರತಭಂಗವ ಮಾಡಿ(ದೆ)
ತುಂಗ ಕುದುರೆಯೇರಿದ ರಂಗವಿಠಲನೆ ||೩||