( ರಾಗ ಸಂಕರಾಭರಣ ಅಟತಾಳ )
ಇಕೋ ನಮ್ಮ ಸ್ವಾಮಿ
ಜಗಂತರ್ಯಾಮಿ ||
ಒಳಗೆ ನೋಡಿ ನಿಮ್ಮ
ಹೊಕ್ಕುವ ಪರಬೊಮ್ಮ
ಅಳಿಯಬೇಕೋ ಹಮ್ಮ
ತಿಳಿಯಬೇಕೋ ಧರ್ಮ ||
ವಸ್ತು ಬಿಟ್ಟು ನೋಡಿ
ಸ್ವಸ್ಥದಿ ಮನನ ಮಾಡಿ
ಅಸ್ತವ್ಯಸ್ತಡ್ಡಾಡಿ ಸ-
ಮಸ್ತರೊಡಗೂಡಿ ||
ಮುಟ್ಟಿ ಗುರುಧ್ಯಾನ
ಕೆಟ್ಟು ಹೋಗುವುದೇನಾ
ಮುಟ್ಟಿ ಲಕ್ಷ್ಮಿಪುರಂದರ
ವಿಠಲೇಶನ ಧ್ಯಾನ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!