ಎಂದು ಕಾಂಬೆನು ಎನ್ನ ಸಲಹುವ
ತಂದೆ ಉಡುಪಿಯ ಜಾಣನ
ಮಂದಹಾಸಪ್ರವೀಣನ
ಇಂದಿರಾಭೂರಮಣನ ||ಪ||
ಕಡಲತಡಿಯೊಳು ಎಸೆದ ರಂಗನ
ಕಡೆಗೋಲ ನೇಣ ಪಿಡಿದನ
ಮೃಡ ಪುರಂದರ ಅಜರೊಡೆಯನ ಈ-
ರಡಿಗಳಲಿ ಶಿರ ಇಡುವೆ ನಾ ||೧||
ದೇವಕಿಯ ಜಠರದಲಿ ಬಂದನ
ಆವಪಳ್ಳಿಲಿ ನಿಂದನ
ಮಾವ ಕಂಸನ ಕೊಂದನ
ಕಾವನಯ್ಯ ಮುಕುಂದನ ||೨||
ಪೂರ್ಣಪ್ರಜ್ಞರಿಗೊಲಿದು ದ್ವಾರಕೆಯ
ಮಣ್ಣಿನೊಳು ಪ್ರಕಟಿಸಿದನ ಭ-
ವಾರ್ಣವಕೆ ಪ್ಲವನಾದನ ಪ್ರ-
ಸನ್ನವೆಂಕಟಕೃಷ್ಣನ ||೩||
-----------ಪ್ರಸನ್ನವೆಂಕಟದಾಸರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!