ಅನ್ಯಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ ||ಪ||
ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ ||ಅ||
ಮಿಂದು ಮನುವನ್ನ ಬಿಡಿಸಿ ಮೇಲುವಸ್ತ್ರವನ್ನು ತೊಡಿಸಿ
ಅಂದವಾದ ಆಭರಣವಿಟ್ಟು ಅರ್ತಿಯಿಂದಲಿ ನೋಡುತ
ಗಂಧ ಕಸ್ತೂರಿ ಪುನುಗು ಪೂಸಿ ಗಮಕದಿಂದ ಹೂವ ಮುಡಿಸಿ
ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ ||೧||
ಪೊಂಬಣ್ಣ ಎಸೆವ ಮೈಯದರೊಳು ಒಲಿವ ಕುಚಕ್ಕೆ ಕೈಯನಿಟ್ಟು
ಕಂಬುಕಂಧರವ ನೋಡಿ ಕಸ್ತೂರಿನಿಟ್ಟು ಮುಟ್ಟಿಸುತ
ಹಂಬಲಿಸಿ ಸತಿಯ ನೋಡಿ ಹಲವು ಬಂಧದಿಂದ ಕೂಡಿ
ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ ||೨||
ಸತಿಪತಿಯು ಏಕವಾಗಿ ಸರ್ವಜನರ ಹಿತವ ಚಿಂತಿಸಿ
ಅತಿಥಿಯನ್ನು ಪೂಜೆಮಾಡಿ ಒಂದೆನಿಸಿಕೊಳ್ಳುತ
ಕ್ಷಿತಿಯೊಳಧಿಕವಾದ ಗುರು ಪುರಂದರವಿಠಲನ್ನ ಪಾದವನು ಸ್ಮರಿಸಿ
ಸತಿಸುತರು ಹಿತರು ನೀವು ಸುಖದಿಂದ ಆಳಿರೋ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!