ಕಥಾಶ್ರವಣ ಮಾಡೋ ಪಾಡೋ ಹರಿ ||ಪ||
ಪಥ ವೈಕುಂಠಕ್ಕಿದು ನೋಡೋ ||ಅ||

ಪತಿತಪಾವನ ಪಾದಾಬ್ಧದಲಿ
ಹಿತದಿಂದ ಭಕುತಿಯ ಮಾಡೋ ||೧||

ಜ್ಞಾನ ಭಕುತಿ ವೈರಾಗ್ಯವೀವ
ಆನಂದತೀರ್ಥರ ಪಾಡೋ     ||೨||

ಅಜಭವಾದಿಗಳಿಗರಸನಾದ ಸಿರಿ
ವಿಜಯವಿಠಲನ ನೋಡೋ    ||೩||