ಎಲೆ ಮನ ಮುರಾರಿಯನು ಕೊಂಡಾಡು ||ಪ||
ಸಾಧನಕಿದು ಉಪಾಯ ನೋಡು ||ಅ||

ಕಾಲನ ದೂತರು ಕಾಲಿಗೆ ಬಿದ್ದರೆ
ನಾಳೆಗೆ ನಿಲುವರೆ ನೋಡು ||೧||

ಮಂದಿಯ ಮಾತಿಗೆ ಎಂದೆಂದು ಮರುಗದೆ
ಮುಂದಿನ ಗತಿ ನೀ ನೋಡು ||೨||

ರಾಜೀವ ಮುಖಿಯರ ಸೋಜಿಗ ಮೆಚ್ಚದೆ
ವಿಜಯವಿಠಲನ ಪಾಡೋ     ||೩||