ಅಳಿವಾ ದೇಹ ಸಿಂಗರಿಸುವೆಯೇಕೆ
ಬೆಳೆಸು ಹರಿಭಕ್ತಿ ಮನದೊಳು ನಿರುತ
ಕಳೆವ ತನುವಿದು ಶಾಶ್ವತವಲ್ಲ ತಿಳಿ
ಒಳಗಿನ ಆತ್ಮ ನಿರಂತರವಾಗಿರಲು
ಘಳಿಗೆಗೊಮ್ಮೆ ಅವನ ಧ್ಯಾನವ ಮಾಡು
ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ
ತಿಳಿ  ನೀ ಕರೆ ಸೇರೆ ನಿನ್ನ ನಾ
ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ