ಅಂಗಳದೊಳಗಾಡಬಾರಯ್ಯ, ಮುದ್ದು
ರಂಗ ನಿನ್ನಯ ಮುಖದೋರಯ್ಯ ||ಪ||
ಅರ್ಧರಾತ್ರಿಯಲ್ಲವತರಿಸಿದ್ಯೊ , ಹೋಗಿ
ಮುದ್ದು ಗೋಪಿಯ ಸುತನೆನಿಸಿದ್ಯೊ
ಭದ್ರದೇವಿಯರ ನೀ ಕಳಿಸಿದ್ಯೊ , ಬಂ-
ದಿದ್ದ ಪೂತನಿಯ ಸಂಹರಿಸಿದ್ಯೊ ||೧||
ವತ್ಸಕಾಯುತಲ್ಹೋಗಿ ವನದೊಳು ಬಂದ
ಕಿಚ್ಚು ನುಂಗಿದೆ ನಿನ್ವದನದೊಳು
ಸ್ವಚ್ಛಮಾಡಿದಿ ಕಾಳಿಜಲಗಳು ತೋರೆ
ಕುಕ್ಷಿಯೊಳಗೆ ತ್ರಿಜಗಂಗಳು ||೨||
ದೇವಕ್ಕಿದೇವಿ ಯಶೋದಾನೆ ವಸು-
ದೇವ ನಂದ ಬಲರಾಮಗೆ ಎದುರು
ಬಾರೋ ಭೂದೇವಿರಮಣನೆ
ಭೀಮೇಶ ಕೃಷ್ಣನೆ ಶ್ಯಾಮವರಣನೆ ||೩||
---ಹರಪನಹಳ್ಳಿ ಭೀಮವ್ವ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!