ಅಡಿಗಡಿಗೆ ನಿನ್ನ   ಅಡಿಗಳನೇ ನಂಬಿದೆ
ತೋರಯ್ಯ ಎನಗೆ ಚಿತ್ತಜನಯ್ಯ
ಎಡಬಿಡದೆ ನಿನ್ನಂಘ್ರಿ ಚೆನ್ನಾಗಿ ಪೂಜಿಸಿ
ಎಡೆಗೆಡಿಪ ಲಿಂಗವನ್ನು ಬಂಧಿಸಿಕೊಂಡು
ಬಡಿವಾರ ನಿನ್ನವನೆಂಬೊ ಮಾತನೇ ಪೇಳಿ
ಸಡಗರದಿ ಮೆರೆವ ದಾಸನ್ನ ಮಾಡಯ್ಯಾ
ಬಿಡೌಜಪತಿ ಸಿರಿವಿಜಯವಿಠಲ ಸ್ವಾಮಿ
ಬರಿಸೋ ಬರಿಸೋ ನಿನ್ನ ಸ್ಮರಣೆ    

- ವಿಜಯದಾಸರು