ಆಗಲಿ ಹರಿಕೃಪೆ ಭಾಗವತರ ಸಂಗ
ನೀಗುವೆ ನಿಮ್ಮ ದುರಿತಂಗಳಿರ  ||ಪ||

ಹರಿನಂಟರೋಲೈಸಿ ಜ್ಞಾನಾಸ್ತ್ರ ಗಳಿಸುವೆ
ಹರಿನಾಮ ವಜ್ರ ಕವಚ ತೊಡುವೆ
ಹರಿ ನಿರ್ಮಾಲ್ಯದ ಉತ್ತಮಾಂಗಾಭರಣವಿಟ್ಟು
ನೆರೆ ನಿಮ್ಮ ನಾಮ ನಿರ್ನಾಮವ ಮಾಳ್ಪೆ ||೧||

ಶ್ರೀಲೋಲನಂಘ್ರಿಸಮ್ಮದ ಸೈನ್ಯವ ಕೂಡಿ
ತಾಳ ದಂಡಿಗೆ ಗೀತಾಯುಧಗಳಿಂದ  
ಕಾಲಕಾಲಕೆ ನಿಮ್ಮ ಮೇಳವ ಮುರಿದಾಡಿ
ಹಾಳುಮಾಡುವೆ ಕೈಯಲಿ ಕಡ್ಡಿ ಕೊಡುವೆ    ||೨||

ಇಕ್ಷು ಸ್ವಾದಾದರೆ ಬೇರ ಸಹಿತ ನೀವು
ಭಕ್ಷಿಸಬೇಡಿ ಬಾರದೆ ಮರಳಿ
ಪಕ್ಷಿಗಮನ ಪ್ರಸನ್ವೆಂಕಟೇಶನ
ಪಕ್ಷದವರ ಹಗೆ ಹೊಲ್ಲಸಲ್ಲ    ||೩||

----ಪ್ರಸನ್ನವೆಂಕಟದಾಸರು