ಆರೆನ್ನ ಉಳುಹುವರೈ ರಂಗ
ಘೋರಾರಣ್ಯ ಭವದಿ ಸಿಕ್ಕಿದೆ ರಂಗ ||ಪ||
ಎಂಟು ಕಾಡಾನೆ ಎಂಟು ಕಡೆಯಲಿ ನಿಂತಿವೆ
ಗಂಟನಿಕ್ಕಿದೆ ಮೂರು ದಳ್ಳುರಿಯ
ಸುಂಟರಗಾಳ್ಯೆಬ್ಬರಿಸಲು ಗಿಡ-
ಗಂಟಿಲಿ ಬಿದ್ದೆ , ನೀನಲ್ಲದೆ ನನ್ನ ||೧||
ಹುಲಿಯೊಂದು ಗುಡುಗುಡಿಸುತಿದೆ ಭಯಂಕರ
ಬಲು ತೋಳೆರಡು ಕೆಕ್ಕರಿಸುತಿವೆ
ಸಲುಗೆಯ ಕೋತಿಯೊಂದಣಕಾಡುತಲಿದೆ
ಮೇಲೆ ಕರಡಿಯು ಹತ್ತೆಳವುತಿದೆ ||೨||
ಕಾಳುರಗನ ಕಟ್ಟು ಮೈತುಂಬ ನನ್ನ
ನಾಲಿಗೇಳದು ನಿನ್ನ ಕರೆಯಲಿಕೆ ನಿ-
ನ್ನಾಳಟ್ಟಿ ಕರೆಸಿಕೊಳ್ಳಲೆ ತಂದೆ ನಾ
ಗೋಳಿಟ್ಟೆ ಪ್ರಸನ್ವೆಂಕಟ ಬಂಧು ||೩||
----ಪ್ರಸನ್ನವೆಂಕಟದಾಸರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!