ಆರತಿ ಮಾಡೆ ನೀರೆ ಭಾರತಿ-
ಗಾರತಿ ಮಾಡೆ ನೀರೆ
ಮಾರುತಿ ಸತಿಯಾದ ದ್ರೌಪದಿದೇವ್ಯೇರಿ -
ಗಾರತಿ ಮಾಡೆ ನೀರೆ ||ಪ||
ಅರಸು ಭೀಮರಾಯಗ್ಹೊಂದಿ ಕುಳಿತ ಕೃಷ್ಣೆ
ಅರಿಷಿಣ ಕುಂಕುಮ ಹಚ್ಚಿ ಹರುಷದಿ ದ್ರೌಪದಿ ||೧||
ಸುಂದರ ಭೀಮಸೇನ ತಂದ ಸುಗಂಧ ಕುಸುಮ
ಗಂಧ ಪರಿಮಳ ಹಚ್ಚಿ ಮುಡಿಸಿ ಮಲ್ಲಿಗೆ ಕೃಷ್ಣೆ ||೨||
ವಾಸವಾಗಿ ಬೊಮ್ಮಗಟ್ಟಿಲಿ ಕುಳಿತ ಭೀ-
ಮೇಶಕೃಷ್ಣನ ದಯ ಪಡೆದ ಪಾಂಚಾಲಿ ಸತಿ ||೩||
-------ಹರಪನ ಹಳ್ಳಿ ಭೀಮವ್ವ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!