ಆರತಿಯನೆತ್ತಿರೆ  ಅಚ್ಯುತನಿಗೆ
ಅನಂತನಿಗೆ ಗೋವಿಂದನಿಗೆ ||ಪ||

ಕಾಲಾಂತರ್ಗತ ಕಾಲನಿಯಾಮಕ
ಕಾಲೋತ್ಪಾದಕ ಕಾಲಾತ್ಮನಿಗೆ ||೧||

ನೊಂದು ಕೌಂಡಿನ್ಯರು ಮುಂದೋರದಲಿರೆ
ಬಂದು ಕರವ ಪಿಡಿದಾನಂದವಿತ್ತಗೆ ||೨||

ಸಂತತ ನಡೆಯುವರಂತರ ಬಿಡಿಸುವ-
ನಂತಮಹಿಮ ಜಯವಂತ ಶ್ರೀಕಾಂತಗೆ ||೩||

--------ದಾಸರ ಲಕ್ಷ್ಮೀನಾರಾಯಣರಾಯರು