ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ ||ಪ||
ಮಾತೆ ಇದ್ದರು ದೃಢವೃತನಾದ ಧ್ರುವಗೆ ಶ್ರೀ-
ಪತಿ ನೀನೆ ಗತಿಯಾದೆ ಆರಾದರಯ್ಯ
ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ
ಗತಿ ನೋಡಿ ನರಹರಿ ಗತಿಪ್ರದ ನೀನಾದೆ ||೧||
ಭ್ರಾತರಾವಣನ ಸಹಜಾತ ವಿಭೀಷಣನ ನಿ-
ರ್ಭೀತನ ಮಾಡಿ ಕಾಯ್ದವರಾರಯ್ಯ
ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ
ಸಂತೈಸಿದಾನಾಥರಕ್ಷಕ ಹರಿಯಲ್ಲವೇ ||೨||
ಬಂಧುಗಳಿರೆ ಗಜರಾಜನ ನಕ್ರವು
ಬಂದು ಬಾಧಿಸೆ ಬಂಧ ಬಂದು ಹರಿಸಿದರ್ಯಾರೊ
ಅಂದು ಇಂದು ಎಂದನಿಮಿತ್ತ ಬಂಧು ನೀ
ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ ||೩||
ಸುತರು ರಕ್ಷಕರೇನೊ ಶತಸೂನುಗಳಿಗೆ ಪಿತ
ಧೃತರಾಷ್ಟ್ರಗೆ ಕೊನೆಗಾರಾದರಯ್ಯ
ಇತರರ ಪಾಡೇನೊ ಶ್ರೀ ವೆಂಕಟೇಶನೆ
ಗತಿ ಎಮಗೆ ಉರದಾದ್ರಿವಾಸ ವಿಠಲನಲ್ಲವೆ ||೪||
--- ಉರಗಾದ್ರಿವಾಸವಿಠಲರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!