(ರಾಗ ಮಧ್ಯಮಾವತಿ. ಆದಿ ತಾಳ.)
ಆರ ಹಾರೈಸಿದರೇನುಂಟು, ಬರೆ
ನೀರ ಕಡೆದರಲ್ಲೇನುಂಟು
ಅಂತರವರಿಯದ ಅಧಮನ ಬಾಗಿಲ
ನಿಂತು ಕಾಯ್ದರಲ್ಲೇನುಂಟು
ಇಂತೆರದಲ್ಲಿಯು ಬಳಲಿಸಿ ತಾ ಯಮ-
ನಂತೆ ಕೊಲುವನಲ್ಲೇನುಂಟು
ಕೊಟ್ಟುದ ಕೊಂಡುದ ಹೇಳನ ಮಾಡೋ ಕ-
ನಿಷ್ಠನ ಸೇರಿದರೇನುಂಟು
ಬಿಟ್ಟಿಯ ಮಾಡಿಸಿ ಬೆದರಿಸಿ ಬಿಡುವನ
ಪಟ್ಟಣ ಸೇರಿದರೇನುಂಟು
ಪಿಸುಣನ ಕುದುರೆಯ ಮುಂದೋಡಲು ಬರೆ
ಬಿಸಿಲ್ಹಣ್ಣಲ್ಲದಲೇನುಂಟು
ವಸುಧೆಯೊಳಗೆ ಸಿರಿ ಪುರಂದರ ವಿಠಲನೆ-
ಂದುಸಿರಲು ಮುಕುತಿಯ ಫಲವುಂಟು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!