(ರಾಗ ಧನ್ಯಾಸಿ. ಆದಿ ತಾಳ)
ಬಣ್ಣಿಸಿ ಗೋಪಿ ಹರಸಿದಳು
ಎಣ್ಣೆಯನೊತ್ತುತ ಯದುಕುಲ ತಿಲಕನಿಗೆ
ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರ ಪಾಲಿಸು ರಕ್ಕಸರ ಸೋಲಿಸು
ವಾಯುಸುತಗೆ ನೀನೊಡೆಯನಾಗೆನುತ
ಧೀರನು ನೀನಾಗು ಅಚ್ಯುತ ನೀನಾಗು
ದಾನವಾಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರ ವಿಟ್ಠಲಾಗೆನುತ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!