( ರಾಗಾ ಪೂರ್ವಿ. ಆದಿ ತಾಳ)
ಮಧ್ವ ಮತದ ಸಿದ್ಧಾಂತದ ಪದ್ಧತಿ ಬಿಡಬೇಡ
ಬಿಡಬೇಡ ಬಿಟ್ಟು ಕೆಡಬೇಡ ಕೆಡಬೇಡ ||ಪ||
ಬಿಟ್ಟರೆ ಯಮ ಬೆನ್ನೆಟ್ಟುವ ಮೂಢ ||ಅ.ಪ||
ಹರಿ ಸರ್ವೋತ್ತಮನಹುದೆಂಬ ಜ್ಞಾನವ-
ನರಿತು ಬಾಳ್ವುದಕೆ ಪರತರವಾದ ಮತ ||
ಘೋರ ಯಮನ ಭಯ ದೂರ ಓಡಿಸಿ ಮು-
ರಾರಿಯ ಚರಣವ ಸೇರೋ ಸನ್ಮಾರ್ಗವ ||
ಭಾರತೀಶ ಮುಖ್ಯ ಪ್ರಾಣಾಂತರ್ಗತ
ನೀರಜಾಕ್ಷ ಪುರಂದರ ವಿಠಲನ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!