(ರಾಗ ಕಮಾಚ್. ರೂಪಕ ತಾಳ )
ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ
ಮೂರುತಿಯೆನೆ ನಿಲ್ಲಿಸೋ ||ಪ||
ಎಳೆ ತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||
ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯು ಉರದೊಳೊಪ್ಪುವ ನಿನ್ನ||
ಭಕ್ತರ ಕಾಮಧೇನು ಭಾಗ್ಯದ ಸುರಧೇನು
ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!