(ರಾಗ ನಾಟ ಅಟ ತಾಳ)

ಸತತ ಗಣ ನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿ ದೇವಿಯು ಮು-
ಕುತಿ ಪಥಕೆ ಮನವೀವ ಮಹಾ ರುದ್ರದೇವ
ಭಕುತಿದಾಯಕಳು ಭಾರತೀ ದೇವಿ ಯು-
ಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿಯಿತ್ತು
ಗತಿ ಪಾಲಿಸುವ ನಮ್ಮ ಪವಮಾನನು

ಚಿತ್ತದಲಿ ಆನಂದ ಸುಖನೀವಳು ರಮಾ
ಭಕ್ತ ಜನರೊಡೆಯ ನಮ್ಮ ಪುರಂದರವಿಠಲನು
ಸತತ ಇವರೊಳು ನಿಂತೀ ಕೃತಿಯ ನಡೆಸುವನು