(ರಾಗ ಕಾಂಭೋಜ ಝಂಪೆತಾಳ)

ಈಗ ಮಾಡೆಲೋ ರಾಮಧ್ಯಾನವ , ನೀ
ಮೂಕನಾಗಿರಬೇಡ ಎಲೆ ಮಾನವ ||ಪ||

ಕಾಲನ ದೂತರು ಕರೆವಾಗ ನೀ
ಕಾಲಗೆಟ್ಟು ಕಣ್ಣ ಬಿಡುವಾಗ
ನಾಲಗೆ ಸೆಳಕೊಂಡು ಜ್ಞಾನಗೆಟ್ಟಿರುವಾಗ
ನೀಲವರ್ಣನ ಧ್ಯಾನ ಬರುವುದೇನಯ್ಯ ||

ಸತಿಸುತರೆಂಬ ಸಂದಣಿಯೊಳು ನೀ
ಮತಿಭ್ರಷ್ಟನಾಗಿ ಮನದೊಳು
ಸತತ ಶ್ರೀಲಕ್ಷ್ಮಿಯ ಪತಿಯನ್ನು ನೆನೆದರೆ ಸ-
ದ್ಗತಿಯ ಸನ್ಮಾರ್ಗ ಪಾರಂಪದವಿ ಈವನಯ್ಯ ||