ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ ||ಪಲ್ಲವಿ||

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧||

ಕನಕ ವೃಷ್ಟಿಯ ಕರೆಯುತ ಬಾರೆ ಮನ ಕಾಮನೆಯ ಸಿದ್ಧಿಯ ತೋರೇ
ದಿನಕರ ಕೋಟಿ ತೇಜದಿ ಹೊಳೆವ ಜನಕರಾಯನ ಕುಮಾರಿ ಬೇಗ ||೨||

ಅತ್ತಿತ್ತಲಗಲದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಳ
ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆವಾ ಪುತ್ಥಳಿ ಬೊಂಬೆ ||೩||

ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ ವೆಂಕಟರಮಣನ ಬಿಂಕದ ರಾಣೀ ||೪||

ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠಲನ ರಾಣಿ ||೫||