(ರಾಗ ಕಾಂಭೋಜ ಆದಿತಾಳ)
ಕೊಳಲನೂದುತ್ತಾ ಬಂದ
ನಮ್ಮ ಗೋಪಿಯ ಕಂದ
ಕೊಳಲನೂದುವುದು ಬಲು ಚಂದ ||ಪ||
ಆ ವಸುದೇವನ ಕಂದ , ಇವ ನೋಡೆ
ದೇವಕಿ ಬಸಿರೊಳು ಬಂದ
ಮಾವ ಕಂಸನ ಕೊಂದ
ಭಾವಜನಯ್ಯ ಮುಕುಂದ ||
ಮುತ್ತಿನಾಭರಣವ ತೊಟ್ಟು
ಹಸ್ತದಿ ಕೊಳಲ ಕೊಟ್ಟು
ಕಸ್ತೂರಿ ತಿಲಕನಿಟ್ಟಾ
ತುತ್ತುರುತುರುರೆಂಬ ನಾದವ ಪಿಡಿಯೆ ||
ಹಿಂದೆ ಗೋವುಗಳ ಹಿಂಡು
ಮುಂದೆ ಗೋಪಾಲ ದಂಡು
ಹಿಂದಕ್ಕೆ ದೈತ್ಯರ ಕೊಂದ ಪು-
ರಂದರವಿಠಲ ಚೆಂದ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!