(ರಾಗ ಸೌರಾಷ್ಟ್ರ ಆದಿತಾಳ)

ಮಂಗಳಂ ಜಯಮಂಗಳಂ ||ಪ||

ಚರಿಸುವ ಜಲದಲಿ ಮತ್ಸ್ಯವತಾರನಿಗೆ
ಗಿರಿಯ ಬೆನ್ನಿಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಹವತಾರನಿಗೆ
ತರಳನ ಕಾಯ್ದ ನರಸಿಂಹಗೆ ||

ಭೂಮಿಯ ದಾನವ ಬೇಡಿದಗೆ
ಆ ಮಹಾ ಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯರಸ ಗೋಪಾಲಕೃಷ್ಣಗೆ ||

ಬತ್ತಲೆ ನಿಂತಿದ್ದ ಬೌದ್ಧನಿಗೆ
ಉತ್ತಮ ಹಯವೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹುವ
ಕರ್ತು ಶ್ರೀಪುರಂದರವಿಠಲನಿಗೆ ||