ಪಲ್ಲವಿ
ಗೋವಿಂದಾ ನಿನ್ನ ನಾಮವೆ ಚಂದ ||

ಅನುಪಲ್ಲವಿ
ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ||

ಚರಣ
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದೆ ಆನಂದ||೧||
ಪರಮ ಪುರುಷ ಶ್ರೀ ಪುರಂದರ ವಿಟ್ಠಲನ ಹಿಂಗದ ದಾಸರ ಸಲಹುವುದೆ ಆನಂದ ||೨||