( ರಾಗ ಮಧ್ಯಮಾವತಿ. ಅಟ ತಾಳ)

ಬಾರೋ ಬ್ರಹ್ಮಾದಿ ವಂದ್ಯ ||ಪ||
ಬಾರೋ ವಸುದೇವನಂದನ ||ಅ||

ಧಿಗಿ ಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೆ, ಚೆಂದದಿ
ಜಗದೀಶ ನೀ ಕುಣಿದಾಡುತ ಬಾರೋ ಚೆನ್ನ ಕೇಶವನೆ ||

ಗೊಲ್ಲರ ಮನೆಗೆ ಪೋಗಲು ಬೇಡ ಗೋವಿಂದ ಕೇಳೋ, ನಿನಗೆ
ಹಾಲು ಬೆಣ್ಣೆ ಮೊಸರಿಕ್ಕುವೆ ಉಣ್ಣಬಾರೋ ||

ದೊಡ್ಡ ದೊಡ್ಡ ಮುತ್ತಿನ ಹಾರ ಹಾಕಿ ನೋಡುವೆನೊ, ನೀನು
ದೊಡ್ಡ ಪುರದ ದ್ವಾರಕಾವಾಸ ಪುರಂದರವಿಠಲ ||