( ರಾಗ ಸೌರಾಷ್ಟ್ರ. ಅಟತಾಳ)

ಬಾಲಕೃಷ್ಣನೆ ಬಾರೋ ಬೇಗ ಬಾರೋ ||ಪ||

ಬಾಲಕೃಷ್ಣನೆ ಬಾರೋ ಕಾಲಗಡಗವನಿಡುವೆನು
ಕೋಲು ಬುಗುರಿ ಚೆಂಡು ನಿನಗೆ ಇಟ್ಟಿರುವೆ ||ಅ||

ಅಣ್ಣಯ್ಯ ಬಲರಾಮ ಬೇಡುವನಯ್ಯ
ಅಣ್ಣಯ್ಯ ನೀ ಬಾರೆಲೊ
ಎನ್ನ ಸಾಕುಮಾಡದೆ ಓಡಬೇಡವೊ ಈಗ
ಬಣ್ಣಿಸಿ ತೂಗುವೆ ಗಮ್ಮನೆ ಮಲಗೊ ||

ಯೋಗಿಗಳರಸನೆ ನಿನಗೆ ನಾ
ಜೋಗುಳ ಪಾಡುವೆನೊ
ನಾಗಭೂಷಣ ಬಂದು ಅಂಜಿಸುವ ನಿನ್ನನ್ನ
ಜೋಗಿ ಹಣಿಕ್ಹಾಕುವ ಕಣ್ಣು ಮುಚ್ಚಿಕೊಳ್ಳೋ ||

ಭಕ್ತ ವತ್ಸಲನೆನಲೆ ನಿನ್ನ ನಾ
ಮಗುವೆಂದು ಕರೆಯಲೆ
ಅಗಣಿತಮಹಿಮನೆ ಜಗವ ಮೋಹಿಪ ರಂಗ
ಮಗುವಲ್ಲವೋ ತಂದೆ ಪುರಂದರವಿಠಲಯ್ಯ ||