( ರಾಗ ಗೌಳಪಂತುವರಾಳಿ ಅಟತಾಳ / ಕಾಮವರ್ಧಿನಿ. ಛಾಪು ತಾಳ)

ಏಕೆ ನಿನಗಿಷ್ಟು ಗಂಜಾಲ, ಬಿಡೊ ಹರಿಯೆ ||ಪ||

ಚಿಕ್ಕವನೆಂದು ನೀ ಠಕ್ಕು ಮಾಡಲುಬೇಡ
ಕಕ್ಕಸಕುಚಗಳ ಕೈಲಿ ಕೊಡುವವಳಲ್ಲ ||

ಸದರ ಬೇಡ ನಿನ್ನ ಬಗೆಯೆಲ್ಲ ನಾ ಬಲ್ಲೆ
ಬೆದರಿಸಿದರೆ ನಾನು ಅಂಜುವ ಹೆಣ್ಣಲ್ಲ ||

ಸಾಕು ನಿನ್ನ ಸರಸ ಸಲ್ಲಾಪವು, ಬೆರೆಯ
ಬೇಕೆಂದು ಬರುವೆನು ಪುರಂದರವಿಠಲ ||