( ರಾಗ ಹುಸೇನಿ. ರೂಪಕ ತಾಳ)
ಎನ್ನ ರಕ್ಷಿಸೊ ನೀನು ದೇವರ ದೇವ ||ಪ||
ಎನ್ನ ರಕ್ಷಿಸೋ ನೀನು ಯಾದವಶಿರೋಮಣಿ
ಮುನ್ನ ದ್ರೌಪದಿಯಭಿಮಾನ ಕಾಯಿದ ಕೃಷ್ಣ ||ಅ||
ಬಾಲನ ಮೊರೆಯನ್ನು ಕೇಳಿ ಕೃಪೆಯಿಂದ
ಪಾಲಿಸಿದ್ಯೋ ನರಸಿಂಹರೂಪದಿಂದ ||
ಪಾಷಾಣವ ಚರಣದಿ ಯೋಷಾರೂಪವ ಮಾಡಿ
ದೋಷ ಸಂಹಾರ ನಿರ್ದೋಷ ಗುಣಪೂರ್ಣನೆ ||
ಇನಕುಲಾಂಬುಧಿ ಚಂದ್ರ ಘನ ಶುಭಗುಣಸಾಂದ್ರ
ಸನಕಾದಿ ಮುನಿ ವಂದ್ಯ ಪುರಂದರವಿಠಲ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!